Renovated DRAMA THEATRE :  Don Bosco Hall to be inaugurated on January 27

ನವೀಕೃತ ಡೋನ್ ಬೊಸ್ಕೊ ನಾಟಕದ ಸಭಾಂಗಣ . 27 ರಂದು ಉದ್ಘಾಟನೆ

Don Bosco Hall, Balmatta, Road near Jyothi one of the oldest drama theatres halls of the city and also the only auditorium meant exclusively for Drama with artistic, literary, and cultural activities is all set for its formal inauguration following renovation.

The renovated auditorium will be blessed by Rt. Rev. Dr. Peter Paul Saldanha, Bishop of Mangalore Diocese during the inauguration ceremony which will take place on Thursday, January 27, 2022, at 03:00 p.m. Sri N. Shashi Kumar, Commissioner of Mangaluru City Police will inaugurate the new auditorium.

Rt. Rev. Dr. Alwyn Dias, Provincial Head of the Capuchin Friars has consented to be the Chief Guest. Abu Dhabi-based businessman Sri Leo Rodrigues, Rev. Fr. Melwyn Pinto, Rector of St. Aloysius College, and Sri Santhosh Sequeira, Kankanady will be the Guests of Honour. Rev. Fr. Paul Melwyn D’Souza, President of Konkani Natak Sabha will preside over the function.

The inauguration ceremony will be followed by a cultural programme at 06:00 p.m by the actor members of the Sabha..

Office Bearers of Konkani Natak Sabha:

  • Sri Liston Derric D’souza, Vice President
  • Sri Floyd D’Mello, General Secretary
  • Sri Raymond D’Cunha, Public Relations Officer
  • Sri Gerald Concessao, Treasurer
  • Sri Praveen Rodrigues, Joint Secretary
  • Sri Cletus Lobo, Executive Committee Member

Don Bosco Hall was constructed in the year 1951  by the Konkani Natak Sabha. The Konkani Natak Sabha is the mother institution of Mangalore Konkani theatre Don Bosco Hall. It has served as the venue to showcase Konkani drama and performing arts.

Konkani Natak Sabha was the brainchild of the Jesuit priest Rev. George Albuquerque Pai. On September 19, 1943, he had successfully staged a Konkani drama ‘Vignant Jeeth’ at the Academy Hall of St. Aloysius College by mobilizing a few enthusiastic budding youths of Mangalore. This occasion proved to be the initiation for establishing the Konkani Natak Sabha. Hence it is considered to be the Foundation Day of Konkani Natak Sabha. ‘Natak Dwarim Dharmic Saadhan’ is the motto of Konkani Natak Sabha.

Protection and preservation of Konkani culture through Konkani songs, music, dance, drama, and other language-based media, and through this, to propagate humanistic values is the sole objective of Konkani Natak Sabha.

The Konkani Natak Sabha, founded by the Jesuit priest Rev. George Albuquerque Pai, was continued, nurtured, and groomed by the Capuchin priest Rev. Philip Neri. In its initial years, the Milagres School premises served as the venue for the meetings, dramas, and other activities of Konkani Natak Sabha. At the same time, the search had started for having its own premises for Konkani Natak Sabha. As result, a roadside property at Balmatta Road near Hampankatta was purchased and registered in 1946. Rev. Fr. Richard, the Capuchin Provincial Head laid the foundation stone on September 19, 1948.

Though the funding for the construction of the building proved to be a difficult task, the Jesuit priest George A. Pai and Capuchin friar Philip Neri took it as a challenge and completed the building construction project with the help of various generous donors. St. Don Bosco was chosen as the patron and guardian of Konkani Natak Sabha. Hence the building came to be known as Don Bosco Hall. The new auditorium was blessed by Rev. Fr. Julian D’Souza; Vigar Jeral (Shresta Guru) of Mangalore Diocese on August 19, 1951, and the then collector Sri Rajaratnam inaugurated it. On this occasion, a play ‘Sapan Va Nij Gazal’, written by M. P. D’Sa was performed on the new stage.

Over the last 70 years of its existence, Don Bosco Hall has provided a platform for thousands of artists, dramatists, singers, and music composers to introduce and showcase their talents. This hall, which has a history of seven decades, is now renovated into a stunning modern theatre. It is all set to host artistic performances by the exponents of theatre, music, and dance. There are also facilities for conducting various training programs in art.

272 Drama and performance artiste’s of 14 different units are the members of Konkani Natak Sabha. There is also a women’s unit.

ಮಂಗಳೂರು ನಗರದ ಅತ್ಯಂತ ಹಳೆಯ ನಾಟಕದ ಮತ್ತು ಕಲಾ, ಸಾಹಿತ್ಯಿಕವಾಗಿ ಸಾಂಸ್ಕೃತಿಕ  ಕಾರ್ಯಕ್ರಮ ಗಳಿಗೆ ಮೀಸಲಾದ ಏಕೈಕ ಸಭಾಂಗಣ ಬಲ್ಮಠ ರಸ್ತೆಯಲ್ಲಿರುವ ಡೋನ್ ಬೋಸ್ಕೋ ಹಾಲ್ ನವೀಕರಣ ಹೊಂದಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ಇದೇ ಜನವರಿ 27 ರಂದು ಅಪರಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ರೈ.ರೆ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನವೀಕೃತ ಸಭಾಂಗಣವನ್ನು ಆಶೀರ್ವದಿಸುವರು. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಉದ್ಘಾತಿಸಲಿದ್ದಾರೆ.

ಕಪುಚಿನ್ ಧರ್ಮಗುರುಗಳ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ರೈ.ರೆ. ಡಾ. ಆಲ್ವಿನ್ ಡಯಾಸ್ ಮುಖ್ಯ ಅತಿಥಿಯಾಗಿ ಭಾಗವಹಿ ಸುವರು. ಗೌರವ ಅತಿಥಿಗಳಗಿ ಅಬುಧಾಬಿಯ ಉದ್ಯಮಿ ಲಿಯೋ ರೊಡ್ರಿಗಸ್, ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ರೆ. ಫಾ. ಮೆಲ್ವಿನ್ ಪಿಂಟೋ, ಕಂಕನಾಡಿ ಸಂತೋಷ್ ಸಿಕ್ವೇರಾ ಅವರು ಭಾಗವಹಿಲಿದ್ದಾರೆ. ಕೊಂಕಣಿ ನಾಟಕ ಸಭಾದ ಅಧ್ಯಕ್ಷ  ರೆ. ಫಾ. ಪಾವ್ಲ್ ಮೆಲ್ವಿನ್  ಡಿ ಸೋಜಾ ಅಧ್ಯಕ್ಷತೆ ವಹಿಸುವರು.

ಉದ್ಘಾಟನೆಯ ಬಳಿಕ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕೊಂಕಣಿ ನಾಟಕ ಸಭಾದ ಪದಾಧಿಕಾರಿಗಳು:

ಲಿಸ್ಟನ್  ಡೆರಿಕ್ ಡಿ ಸೋಜಾ- ಉಪಾಧ್ಯಕ್ಷರು

ಫ್ಲಾಯ್ಡ್ ಡಿಮೆಲ್ಲೊ – ಪ್ರಧಾನ ಕಾರ್ಯದರ್ಶಿ

ರೈಮಂಡ್ ಡಿ ಕುನ್ಹಾ – ಸಾರ್ವಜನಿಕ ಸಂಪರ್ಕ  ಅಧಿಕಾರಿ

ಜೆರಾಲ್ಡ್ ಕೊನ್ಸೆಸ್ಸೋ – ಕೋಶಾಧಿಕಾರಿ

ಪ್ರವೀಣ್ ರೊಡ್ರಿಗಸ್- ಸಹ ಕಾರ್ಯದರ್ಶಿ

ಕ್ಲೀಟಸ್ ಲೋಬೊ – ಕಾರ್ಯಕಾರಿ ಸಮಿತಿ ಸದಸ್ಯ.

ಡೋನ್ ಬೋಸ್ಕೋ ಸಭಾಂಗಣವನ್ನು 1951 ರಲ್ಲಿ ಕೊಂಕಣಿ ನಾಟಕ ಸಭಾ ಸಂಸ್ಥೆಯು ಕಟ್ಟಿಸಿತ್ತು. ಕೊಂಕಣಿ ನಾಟಕ ಸಭೆಯು ಕೊಂಕಣಿ ನಾಟಕ ಕಲೆಯ ಮಾತೆ ಹಾಗೂ ಡೋನ್ ಬೋಸ್ಕೋ ಹಾಲ್  ನಾಟಕಗಳ ಕಲಾ ಮಂದಿರ.

ಕೊಂಕಣಿ ನಾಟಕ ಸಭಾವು ಜೆಸ್ವೀಟ್ ಸಂಸ್ಥೆಯ ಫಾ ಜಾರ್ಜ್ ಅಲ್ಬುಕರ್ಕ್ ಪೈ ಅವರ ಕನಸಿನ ಕೂಸು. 1943 ಸೆಪ್ಟೆಂಬರ್ 19 ರಂದು ಅವರು ಮಂಗಳೂರಿನ ಕೆಲವು ಉತ್ಸಾಹಿ, ಉದಯೋನ್ಮುಖ ಯುವಕರನ್ನು ಒಟ್ಟು ಸೇರಿಸಿ ಎಂ. ಪಿ. ಡೆಸಾ ಅವರ  ವಿಗ್ನಾನ್ತ್ ಜೀಕ್ ಎಂಬ ಕೊಂಕಣಿ ನಾಟಕವನ್ನು ಸಂತ ಅಲೋಶಿಯಸ್ ಕಾಲೇಜಿನ ಅಕಾಡೆಮಿ ಹಾಲ್ ನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದ್ದರು.

ಈ ಸಂದರ್ಭದಲ್ಲಿ ಅಲ್ಲಿ ಕೊಂಕಣಿ ಸಭಾ ಸ್ಥಾಪನೆಗೆ ನಾಂದಿಯಾ ಯಿತು. ಅದು ಕೊಂಕಣಿ ನಾಟಕ ಸಭೆಯ ಸ್ಥಾಪನೆಯ ದಿನ. ನಾಟಕ್ ದ್ವಾರಿಂ ಧಾರ್ಮಿಕ್ ಸಾಧನ್ – ಇದು ಕೊಂಕಣಿ ನಾಟಕ ಸಭೆಯ ಧ್ಯೇಯ ವಾಕ್ಯ.

ಕೊಂಕಣಿ ಹಾಡುಗಳು, ಸಂಗೀತ, ನೃತ್ಯ, ನಾಟಕ ಹಾಗೂ ಭಾಷಾ ಮಾಧ್ಯಮಗಳ ಮೂಲಕ ಕೊಂಕಣಿ ಸಂಸ್ಕೃತಿಯನ್ನು ಕಾಯ್ದುಕೊಂಡು, ಉಳಿಸಿಕೊಂಡು ಹೋಗುವುದು ಮತ್ತು ಈ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರಚುರ ಪಡಿಸುವ ಏಕ ಮಾತ್ರ ಉದ್ದೇಶ ಈ ಕೊಂಕಣಿ ನಾಟಕ ಸಭಾ ಸಂಸ್ಥೆಯದು.

ಜೆಸ್ವಿಟ್ ಫಾ. ಜಾರ್ಜ್ ಆಲ್ಬುಕರ್ಕ್ ಪೈ ಅವರು ಸ್ಥಾಪಿಸಿದ ಈ ಕೊಂಕಣಿ ನಾಟಕ ಸಭಾವನ್ನು ಮುಂದುವರಿಸಿ ಅದರ ಪಾಲನೆ, ಪೋಷಣೆ ಮಾಡಿದ್ದು ಕಪುಚಿನ್ ಫಾ. ಫಿಲಿಪ್ ನೆರಿ ಅವರು. ಪ್ರಾರಂಭದ ದಿನಗಳಲ್ಲಿ ಕೊಂಕಣಿ ನಾಟಕ ಸಭಾದ ಸಮಾವೇಶ, ನಾಟಕ ಇತ್ಯಾದಿಗಳು ಮಿಲಾಗ್ರಿಸ್ ಶಾಲೆಯ ವಠರದಲ್ಲಿ ನಡೆಯುತ್ತಿದ್ದವು. ಇದೇ ವೇಳೆ ಕೊಂಕಣಿ ನಾಟಕ ಸಭಾಕ್ಕಾಗಿ ಸ್ವಂತ ಆವರಣಕ್ಕಾಗಿ ಹುಡುಕಾಟ ನಡೆದಿತ್ತು. ಹಾಗೆ ಹಂಪನಕಟ್ಟೆ ಬಳಿ ಬಲ್ಮಠ ರಸ್ತೆಯ ಬದಿ ಜಾಗವನ್ನು ಖರೀದಿಸಿ 1946 ರಲ್ಲಿ ಅದನ್ನು ನೋಂದಣಿ ಮಾಡಲಾಯಿತು. 1948 ಸೆಪ್ಟೆಂಬರ್ 19 ರಂದು ಕಪುಚಿನ್  ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ಫಾ. ರಿಚಾರ್ಡ್ ಅವರು ಹೊಸ  ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಕಟ್ಟಡ ನಿರ್ಮಾಣ ಕಾಮಗಾರಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕಷ್ಟವಾದರೂ ಜೆಸ್ವಿಟ್ ಫಾ ಜಾರ್ಜ್ ಎ. ಪೈ ಮತ್ತು ಕಪುಚಿನ್ ಫಾ ಫಿಲಿಪ್ ನೆರಿ ಅವರು ಇದನ್ನು ಸವಾಲಾಗಿ ಸ್ವೀಕರಿಸಿ ವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಿದರು. ಸಂತ ಡೋನ್ ಬೋಸ್ಕೋ ಅವರನ್ನು ಕೊಂಕಣಿ ನಾಟಕ ಸಭಾದ ಪಾಲಕರಾಗಿ ಆಯ್ಕೆ ಮಾಡಿದರು. ಹಾಗಾಗಿ ಡೋನ್ ಬೋಸ್ಕೋ ಹಾಲ್ ಎಂಬ ಹೆಸರು ಬಂತು. 1950 ಆಗಸ್ಟ್ 19 ರಂದು ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ  ಫಾ. ಜೂಲಿಯನ್ ಡಿ ಸೋಜಾ ಅವರು ಸಭಾಂಗಣವನ್ನು ಆಶೀರ್ವದಿಸಿದರು ಹಾಗೂ ಆಗಿನ   ಜಿಲ್ಲಾ ಕಲೆಕ್ಟರ್ ರಾಜ ರತ್ನಂ ಅವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಹೊಸ ರಂಗ ವೇದಿಕೆಯಲ್ಲಿ ಎಂ. ಪಿ. ಡೆಸಾ ವಿರಚಿತ  ಸಪಣ್ ವಾ ನೀಜ್ ಗಜಾಲ್ ಎಂಬ ನಾಟಕ ಪ್ರದರ್ಶಿಸಲಾಯಿತು.

ಕಳೆದ 70 ವರ್ಷಗಳ ಅವಧಿಯಲ್ಲಿ ಡೋನ್ ಬೋಸ್ಕೋ ಹಾಲ್ ಸಾವಿರಾರು ಕಲಾವಿದರು, ನಾಟಕಕಾರರು, ಗಾಯಕರು, ಗೀತ ಸಾಹಿತ್ಯ ರಚನೆಕಾರರಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮತ್ತು  ಅನಾವರಣಕ್ಕೆ ವೇದಿಕೆಯನ್ನು ಒದಗಿಸಿದೆ.

7 ದಶಕಗಳ ಇತಿಹಾಸ ಇರುವ ಈ ಸಭಾಂಗಣವನ್ನು ಇದೀಗ ನವೀಕರಣ ಮಾಡಲಾಗಿದ್ದು, ಥಿಯೇಟರ್ ಆಗಿ ಕಂಗೊಳಿಸುತ್ತಿದೆ. ನಾಟಕ, ಸಂಗೀತ, ನೃತ್ಯ ಇತ್ಯಾದಿ ಕಲಾವಿದರಿಗೆ ಕಲಾ ಪ್ರದರ್ಶನ ನೀಡಲು ಸಜ್ಜಾಗಿದೆ. ವಿವಿಧ ಕಲಾ ತರಬೇತಿ ಕಾರ್ಯಕ್ರಮ ನಡೆಸಲು ಕೂಡಾ ವ್ಯವಸ್ಥೆಗಳಿವೆ.

14 ವಿವಿಧ ಘಟಕಗಳ 272 ಕಲಾವಿದರು ಕೊಂಕಣಿ ನಾಟಕ ಸಭಾದಲ್ಲಿ ಸದಸ್ಯರು ಇದ್ದಾರೆ. ಒಂದು ಮಹಿಳಾ ಘಟಕ ಕೂಡಾ ಇದೆ.

ಸಾಂಸ್ಕ್ರತಿಕ ಕಾರ್ಯಕ್ರಮ

ಕಾರ್ಯ ನಿರ್ವಾಹಕರಿಂದ  3-5 ನಿಮಿಷಗಳ ಪ್ರಸ್ತಾವನೆ

§  ಪ್ರರ್ಥಾನೆ ಗೀತೆ + ನಾಟ್ಯ

 

§  ಕೊಂಕ್ಣಿ ಭಾಷೆಯ ಬಗ್ಗೆ ಗೀತೆ

ಜೋಕ್-1

ಸಾಮಾಜಿಕಾ ನಾಟ್ಕುಳೊ

ಕೊಂಕಣಿ ಜಾನಪದ ಗೀತೆ

ರೋಸ್ ಮಾರಿ ಯ ಜೀವನ ಕಥೆ

‘ಪುರಾಣ ನಾಟಕದ ಒಂದು ದ್ರಶ್ಯ

 (ಏಸುವಿಗೆ ಶಿಲುಬೆ ಏರಿಸುವುದು)

ಜೋಕ್-2

ಇನ್ಸ್ಟುಮೆಂಟಲ್

ಬಾಯ್ಲಾ

0 Comments

Submit a Comment

Your email address will not be published. Required fields are marked *